Anonimo
ನೈಜ ಕಥೆ
ಒಂದಾನೊಂದು ಊರಿನಲ್ಲಿ ಒಬ್ಬ ರಾಜ ಮತ್ತು ರಾಣಿ ಇದ್ದರು. ಅವರಿಗೆ ಇಬ್ಬರು ಮುದ್ದಾದ ರಾಜಕುಮಾರಿಯರಿದ್ದರು. ಅವರೆಲ್ಲರೂ
ಸಂತೋಷದಿಂದ ಕಾಲ ಕಳೆಯುತ್ತಿದ್ದರು. ಆದರೆ, ವಿಧಿಯ ಆಟದಂತೆ ಒಂದು ದಿನ ಅವರ ಸುಖಿ ಜೀವನದಲ್ಲಿ ಬಿರುಗಾಳಿ ಬೀಸತೊಡಗಿತು.
ಅದೇನೆಂದರೆ, ರಾಜ-ರಾಣಿಯರು ತಮ್ಮ ಕುಟುಂಬದವರೊಂದಿಗೆ ಸಿಗಂಧೂರು ಚೌಡೇಶ್ವರಿ ದೇವಿಯ ದರ್ಶನಕ್ಕಾಗಿ ತೆರಳಿದ್ದರು. ದರ್ಶನ ಮುಗಿಸಿಕೊಂಡು ಹಿಂತಿರುಗುವಾಗ ಮಾರ್ಗಮಧ್ಯೆ ಭೀಕರ ಅಪಘಾತವೊಂದು ಸಂಭವಿಸಿತು. ಆ ದುರಂತದಲ್ಲಿ ರಾಜ, ರಾಣಿ ಹಾಗೂ ಅವರ ಜೊತೆಗಿದ್ದ ಕುಟುಂಬದವರು ದೇವಲೋಕ ಸೇರಿದರು.ಆ ರಾಜಾ -ರಾಣಿ ಸಾಯುವುದಕ್ಕೂ ಮುಂಚೆ ತಮ್ಮ ಜೀವನದಲ್ಲಿ ಅಪಾರ ಕಷ್ಟ-ನಷ್ಟಗಳನ್ನು ಅನುಭವಿಸಿದ್ದರು. ಆಸೆಯಿಂದ ಕಟ್ಟಿಕೊಂಡ ಗೂಡುಗಳು ಕಣ್ಣೆದುರೇ ನಾಶವಾದಾಗಲೂ ಧೃತಿಗೆಡದೆ ಹೋರಾಡಿದ್ದರು. ಆದರೆ, ಈ ಹಠಾತ್ ದುರಂತದಿಂದಾಗಿ ಅವರ ಸಣ್ಣ ರಾಜಕುಮಾರಿ ಸಂಪೂರ್ಣ ಅನಾಥಳಾದಳು. ಹೆತ್ತವರನ್ನು ಕಳೆದುಕೊಂಡ ಆಕೆಗೆ ದಿಕ್ಕು ತೋಚದಂತಾಗಿ, ಜೀವನವೇ ಕತ್ತಲಲ್ಲಿ ಮುಳುಗಿದಂತಾಯಿತು.
ಪ್ರತಿದಿನ ಕಣ್ಣೀರಲ್ಲೇ ಜೀವನ ಕಳೆಯುತ್ತಿದ್ದಳು.
ರಾಜಕುಮಾರಿಗೆ ಅವರ ಅಪ್ಪ ಅಮ್ಮ ಕಳೆದು ಕೊಂಡಿದ್ದು ದುಃಖ ಒಂದು ಕಡೆ ಆದ್ರೆ ಇನ್ನೊಂದು ಕಡೆ ಸುತ್ತ ಮುತ್ತ ಇರೋ ಜನ ಅವಳನ್ನ ಯಾರು ಇಷ್ಟ ಪಡ್ತಾ ಇದ್ದಿಲ್ಲ ಯಾಕೆ ಅಂದ್ರೆ ಅವಳು ಎಲ್ಲಿ ಅವರಿಗೆ ಭಾರ ಆಗ್ತಾಳೋ ಅಂತಾ, ಆ ರಾಜಕುಮಾರಿ ಹತ್ರ ಬದುಕೋಕೆ ಹಣ ಕೂಡ ಇರಲಿಲ್ಲ ಅವಳು ಏನ್ ಮಾಡ್ಬೇಕು ಪಾಪ, ಹೇಗೋ ಅವಳ ಆ ಸಣ್ಣ ವಯಸ್ಸಲ್ಲೇ ಹಣ ಸಂಪಾದನೆ ಮಾಡ್ಬೇಕು ಅಂತ ಕಷ್ಟ ಪಟ್ಟು ದುಡಿತಾಳೆ. ಹೇಗೋ ಚನ್ನಾಗಿ ಇರುತ್ತೆ ಅವಳ ಜೀವನ.ಆದರೆ ಅವಳು ಒಂದು ಹೆಣ್ಣು ಆದ ಕಾರಣ ತುಂಬಾ ಕಷ್ಟಗಳನ್ನ ಅವಳು ಎದುರುಸಬೇಕಾಗುತ್ತೆ. ಅವಳ ಪ್ರೀತಿ, ಮಧುವೆ ಹೀಗೇ ವಿಧ ವಿಧ ವಾದ ಸಮಸ್ಯೆ ಅನುಭವಿಸಬೇಕಾಗುತ್ತೆ.
ಇನ್ನೊಂದೆಡೆ, ರಾಜ-ರಾಣಿ ಬದುಕಿದ್ದಾಗಷ್ಟೇ ಹಿರಿಯ ರಾಜಕುಮಾರಿಗೆ ವಿವಾಹವಾಗಿತ್ತು. ಆಕೆ ತನ್ನ ಗಂಡನ ಮನೆಯಲ್ಲಿ ಇಬ್ಬರು ಮಕ್ಕಳೊಂದಿಗೆ ಸುಖವಾಗಿದ್ದಳು. ಆದರೆ, ಹೆತ್ತವರ ಅಗಲಿಕೆ ಮತ್ತು ತಂಗಿಯ ಅನಾಥ ಸ್ಥಿತಿ
ಆಕೆಯ ಹೃದಯವನ್ನು ಹಿಂಡಿಹಿಂಡಿ ಹಿಂಸಿಸತೊಡಗಿತು.
ಅನಾಥಳಾದ ತಂಗಿಯ ರಕ್ಷಣೆಗೆ ಅಕ್ಕ ಏನು ಮಾಡುತ್ತಾಳೆ? ಈ ಬಡ ಕುಟುಂಬದ ಕಥೆ ಮುಂದೆ ಏನಾಗುತ್ತದೆ?
ಕಥೆ ಮುಂದುವರೆಯುದು