ಮನೆಕೆಲಸ(ಬಟ್ಟೆ, ಪಾತ್ರೆ, ಅಡುಗೆ, ಮಗು)

Tap the picture to see it full size
ಮನೆಕೆಲಸ :
ಮನೆಕೆಲಸ ಇದು ನೋಡುವವರಿಗೆ ಏನೋ ಸಾಮಾನ್ಯ ಅಂತ ಅನಿಸಬಹುದು. ಆದರೆ ಅದನ್ನು ಮಾಡುವವರಿಗೆ ಗೊತ್ತಿರುತ್ತೆ ಅದರ ಕಷ್ಟ ಏನು ಅಂತ.
ಬೆಳಗ್ಗೆ 5 ಗಂಟೆಗೆ ಎದ್ದ ಮೇಲೆಯೇ ಶುರುವಾಗುತ್ತೆ ನಮ್ಮ ದಿನ. 5 ಗಂಟೆಗೆ ಎದ್ದ ತಕ್ಷಣ ಟೀ, ಕಾಫಿ ಅಂತ ಶುರು ಆಗುತ್ತೆ. ಮನೆ ಮಂದಿಗೆಲ್ಲರಿಗೂ ಟೀ ಮಾಡಿ ಕೊಡಬೇಕು. ಟೀ ಟೈಮ್ ಮುಗಿಯುತ್ತಿದ್ದಂತೆ ತಿಂಡಿಯ ಸಮಯ. ಮನೆಯಲ್ಲಿ ಇರುವವರು 'ಮಾಡಿದ ತಿಂಡಿ ಬೇಡ' ಅಂತ ಎಂದರೆ, ಅವರಿಗೆ ಸಪರೇಟ್ ಆಗಿ ಮತ್ತೆ ಬೇರೆ ತಿಂಡಿ ಮಾಡಬೇಕು. ನಾವು ಮಾತ್ರ, ಹೆಣ್ಣುಮಕ್ಕಳು ಏನಾದರೂ ಆಗಲಿ ಅಡ್ಜಸ್ಟ್ ಮಾಡಿಕೊಂಡು ಉಳಿದ ತಿಂಡಿಯನ್ನೇ ತಿನ್ನಬೇಕು.
ಇಲ್ಲಿಗೆ ಮುಗಿಯಲ್ಲ, ಮನೆ ಕೆಲಸ ಇಲ್ಲಿಂದ ನಿಜವಾಗಿ ಶುರು ಆಗುತ್ತೆ. ತಿಂಡಿ ಮಾಡಿ ಎಲ್ಲರಿಗೂ ನೀಡಿ, ನಾವು ತಿನ್ನುವ ಹೊತ್ತಿಗೆ ಸಮಯ ಆಗ್ಲೇ 9 ಗಂಟೆ ಮೇಲಾಗಿರುತ್ತೆ. ಆಮೇಲೆ ಆ ತಿಂಡಿ ತಿಂದ ಪಾತ್ರೆ ತೊಳೆಯಬೇಕು, ಮತ್ತೆ ಸ್ನಾನ ಮಾಡಬೇಕು. ಸ್ನಾನ ಮಾಡಿದ ಮೇಲೆ ಆ ಬಟ್ಟೆ ತೊಳೆಯಬೇಕು. ಆ ಬಟ್ಟೆ ತೊಳೆದು ಒಣಗಿ ಹಾಕಬೇಕು. ಒಣಗಿದ ಮೇಲೆ ಅವುಗಳನ್ನು ಮಡಚಿ ಇಡಬೇಕು.
ಆ ಮಧ್ಯೆ ಮಗುವನ್ನು ನೋಡಿಕೊಳ್ಳಬೇಕು. ಮಗು ಮಲಗಿದ ಮೇಲೆ ಮಾತ್ರ ನಮಗೆ ಸ್ವಲ್ಪ ರೆಸ್ಟ್ ಸಿಗುತ್ತೆ.ಆ ಮಗು ಎದ್ದಿದ್ದಾಗ ಆ ಮಗು ಏನಾದರೂ ಕಿರಿಕಿರಿ / ಕಿತಾಪತಿ ಮಾಡುತ್ತಿದ್ದರೆ, ಎಲ್ಲೆಲ್ಲಿ ಹೋಗುತ್ತೋ ಅಲ್ಲೆಲ್ಲಾ ಅವನ ಹಿಂದೆ ಸುತ್ತಾಡಬೇಕು. ಅಷ್ಟೊತ್ತಿಗೆ ಆಗ್ಲೇ ಮಧ್ಯಾಹ್ನ
ಆಗಿರುತ್ತೆ. ಆಮೇಲೆ ಮಧ್ಯಾಹ್ನದ ಅಡುಗೆ, ಮಧ್ಯಾಹ್ನದ ಅಡುಗೆ ಮಾಡಬೇಕು, ಎಲ್ಲರಿಗೂ ಊಟಕ್ಕೆ ನೀಡಬೇಕು. ಮತ್ತೆ ಅವರು ಊಟ ಮಾಡಿದ ತಟ್ಟೆ ತೊಳೆಯಬೇಕು. ಮತ್ತೆ ತಟ್ಟೆ ತೊಳೆದು ಅವು ಎಲ್ಲಿರುತ್ತೋ ಆ ಜಾಗಕ್ಕೆ ಮತ್ತೆ ಹಾಕಬೇಕು.
ಇಷ್ಟೆಲ್ಲಾ ಮಾಡುವ ಅಷ್ಟರಲ್ಲಿ ಸಂಜೆ ಆಗಿರುತ್ತೆ. ಮತ್ತೆ ಕಸ ಹೊಡೆಯಬೇಕು, ದೀಪ ಹಚ್ಚಬೇಕು. ಅಲ್ಲಿಗೆ ರಾತ್ರಿ ಅಡುಗೆ ಸಮಯ ಆಗುತ್ತೆ. ಅಡುಗೆ ಮಾಡಬೇಕು, ಮತ್ತೆ ಊಟ ನೀಡಬೇಕು. ನಾವು ಊಟ ಮಾಡಿ ಮತ್ತೆ ಪಾತ್ರೆ ತೊಳೆದು ಮಲಗಬೇಕು.
ಅಬ್ಬಬ್ಬಾ! ಒಂದು ದಿನ ಅಂದರೆ ಹೇಗೋ ಮಾಡಬಹುದು. ಆದರೆ ಪ್ರತಿದಿನ 'ಇಷ್ಟೇ' ಅಂದರೆ ಸಾಕಪ್ಪಾ ಜೀವನ ಅನಿಸುತ್ತೆ. ಇನ್ನು ಹಬ್ಬ ಬಂತು ಅಂದರೆ ಮುಗಿಯಿತು! ಮನೆ ಎಲ್ಲಾ ಕ್ಲೀನ್ ಮಾಡಬೇಕು, ಮನೆಯಲ್ಲಿ ಇರೋ ಎಲ್ಲಾ ಬಳಸೋದು-ಬಳಸದೆ ಇರೋದು ಎಲ್ಲಾ ಪಾತ್ರೆ,
ಬಟ್ಟೆ ತೊಳೆಯಬೇಕು. ಇಷ್ಟೆಲ್ಲಾ ಮಾಡಿ ಹಬ್ಬದ ದಿನ ನಾನಾ ತರಹದ ಅಡುಗೆ ಮಾಡಬೇಕು, ಸಿಹಿ ಮಾಡಬೇಕು, ಅನ್ನ-ಸಾಂಬಾರ್, ಹಪ್ಪಳ ಸೋಂಡಿಗೆ ಅಬ್ಬಬ್ಬಾ! ಅವನ್ನೆಲ್ಲಾ ಮಾಡುವ ಅಷ್ಟರಲ್ಲಿ ನಮ್ಮ ಸೊಂಟ, ಕಾಲು, ಬೆನ್ನು, ಮೂಳೆ ಎಲ್ಲಾ ನೋಯ್ತಾ ಇರುತ್ತೆ.
ಯಾವಾಗ ಮಲಗುತ್ತೇವೋ, ಯಾವಾಗ ನಮಗೆ ರೆಸ್ಟ್ ಸಿಗುತ್ತೋ ಅಂತ ಅನಿಸುತ್ತಿರುತ್ತೆ. ಎಷ್ಟೋ ಸಾರಿ ಅಂದುಕೊಳ್ಳುತ್ತೇವೆ—"ಈ ಗಂಡನ ಮನೆ ಸಹವಾಸವೇ ಬೇಡ, ಎಲ್ಲಾದರೂ ಹೋಗಿ ಒಬ್ಬಂಟಿ ಜೀವನ ಮಾಡಬೇಕು" ಅಂತ. ಆದರೆ ಅದು ಆಗಲ್ಲ. ಒಬ್ಬಂಟಿ ಜೀವನ ಅಷ್ಟು ಸುಲಭ ಅಲ್ಲ. ಹೀಗೆ ಎಸ್ಟೆ ಕಷ್ಟ ಬಂದರೂ ಎದುರಿಸಬೇಕು, ಗಂಡನ ಮನೆಯಲ್ಲೇ ಇದ್ದು ಜೀವನ ಕಳೆಯಬೇಕು.ಇದರ ನಡುವೆ ಅತ್ತೆ-ಮಾವ, ಅವರು-ಇವರು ಎಲ್ಲರ ಹತ್ತಿರವೂ ಬೈಸಿಕೊಳ್ಳಬೇಕು. ಮತ್ತೆ ಕೆಲಸ ಮಾಡಬೇಕು, ಸೇವೆ ಮಾಡಬೇಕು. ಏನೋ ಹೇಳುತ್ತಾರಲ್ಲ 'Unpaid Employee' ಅಂತ, ಈ ತರಹ ನಮ್ಮ ಹೆಣ್ಣುಮಕ್ಕಳ ಜೀವನ. ಎಲ್ಲಾ ಹೆಣ್ಣುಮಕ್ಕಳದ್ದು ಇದೇ ಪರಿಸ್ಥಿತಿ ಇರಲ್ಲ. ನಮ್ಮಂಥ ಮಧ್ಯಮ ವರ್ಗದವರ ಮನೆ ಪರಿಸ್ಥಿತಿ ಹೀಗೆ ಇರುತ್ತೆ. ಕೆಲವರನ್ನು ನೋಡಿದರೆ ಅವರು ನಮಗಿಂತ ಸ್ವಲ್ಪ ಚೆನ್ನಾಗಿ ಇರ್ತಾರೆ, ಅವರ ಜೀವನ ಒಂದು ಸ್ವಲ್ಪ ಬೇರೆ ತರಹ ಇರುತ್ತೆ. ಕೆಲವರನ್ನು ನೋಡಿದರೆ ಅವರು ನಮಗಿಂತ ಕೆಟ್ಟ ಪರಿಸ್ಥಿತಿಯನ್ನು ಅನುಭವಿಸುತ್ತಾ ಇರ್ತಾರೆ.
ಈ ಮನೆ ಕೆಲಸ ಮುಗಿಯೋದು ಇಲ್ಲ, ನಮಗೆ ನೆಮ್ಮದಿನೂ ಇಲ್ಲ...
ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ, ಕುಟುಂಬಕ್ಕಾಗಿ ನಮ್ಮ ಇಡೀ ಜೀವನವನ್ನೇ ಸವಿಸಿದರೂ ಕೊನೆಗೆ ನಮಗೆ ಸಿಗೋದು 'ಏನು ಕೆಲಸ ಮಾಡ್ತೀಯಾ?' ಅನ್ನೋ ಮಾತು ಮಾತ್ರ. ಇಷ್ಟೆಲ್ಲಾ ತ್ಯಾಗ ಮಾಡಿದ ಮೇಲೂ ಗೃಹಿಣಿಯ ಶ್ರಮಕ್ಕೆ ಎಲ್ಲೂ ಗೌರವವೇ ಇಲ್ಲ...
After a day of endless household chores, you finally have a moment to rest. Do you
Your vote is final.
More by Sushma Manju
Short link: hurroz.com/c/9LHXK